• Home
  • Categories
    • Urban Farming
    • Gardening
    • Gardening Tips
    • Biodiversity
    • Pest Managment
    • IPS Gardening
    • Nutrients Management
    • Containers
    • Indore Plants
    • Customer Gardening Story

© mydreamgarden . All Rights Reserved.

ತುಳಸಿ

Health Oct 24, 2020

ಪ್ರಾಚೀನ ಕಾಲದಿಂದ ಹಿಂದೂ ಧರ್ಮದಲ್ಲಿ ಗಿಡಮೂಲಿಕೆಗೆ ವಿಶಿಷ್ಟವಾದ ಸ್ಥಾನ ಇದೆ .ಅದರಲ್ಲಿ ತುಳಸಿ ಗಿಡಕ್ಕೆ ಪವಿತ್ರ ಗಿಡವೆಂಬ ಮನ್ನಣೆ ಕೂಡ ಇದೆ.ತನ್ನದೇ ಆದಂಥ ಔಷಧೀಯ ಗುಣದಿಂದ  ತುಳಸಿಯು  “ಸಸ್ಯ ಜಗತ್ತಿಗೆ ರಾಣಿ”  ಎಂದೆನಿಸಿ ಕೊಂಡಿದೆ.

           ಸಸ್ಯಸಿರಿಯಲ್ಲಿ ಮಾನವರಿಗೆ ಜೀವನಾಡಿಯಾಗಿ  ಔ‍ಷಧಿಯ ಲೋಕವನ್ನೇ ತನ್ನಲ್ಲಿ ಮೈಗೂಡಿಸಿಕೊಂಡಿರುವ ಮಹಿಳಾ ಪ್ರಿಯವಾಗಿ  ಎಲ್ಲರ ಮನೆಯ ಅಂಗಳದಲ್ಲಿ ಶುಭದ ಸಂಕೇತವಾಗಿ ರಾರಾಜಿಸುವ ಏಕೈಕ ಸಸ್ಯವೇ ತುಳಸಿ.

ತುಳಸಿ ಮುತ್ತೈದೆಯ ಸಂಕೇತವಾಗಿದ್ದು, ಕಾರ್ತಿಕ ಮಾಸದಲ್ಲಿ ತುಳಸಿಗೆ  ವಿಶೇಷ  ಪ್ರಾಮುಖ್ಯತೆ  ಇದೆ

ತುಳಸಿಯು ಹಲವಾರು ಸತ್ವ  ಗಿಡಮೂಲಿಕೆಯ ಅಂಶವನ್ನು ಹೊಂದಿದ್ದು ಎಲ್ಲಾ ತರಹದ ದೇಹದ ಸಮಸ್ಯೆಗಳಿಗೆ ಇದು  ಸೂಕ್ತವಾದ  ಮದ್ದಾಗಿದೆ.

ತುಳಸಿಯ ವಿಧಗಳು

೧.ರಾಮ ತುಳಸಿ                                                    

೨.ಕೃಷ್ಣ ತುಳಸಿ             

೩.ವಾನ ತುಳಸಿ

ತುಳಸಿಯ ಉಪಯೋಗಗಳು

  1. ತುಳಸಿಯನ್ನು ಎಲ್ಲಾ ತರಹದ ಪೂಜೆ- ಪುನಸ್ಕಾರಗಳಲ್ಲಿ ಉಪಯೋಗಿಸುತ್ತಾರೆ.
  2. ಪ್ರತಿ ದಿನ ತುಳಸಿ ಎಲೆಯನ್ನು ನೀರಿನೊಂದಿಗೆ   ಖಾಲಿ ಹೊಟ್ಟೆಗೆ ತಿನ್ನುವುದರಿಂದ ಬುದ್ಧಿಶಕ್ತಿ ಹಾಗೂ ಸ್ಮರಣಶಕ್ತಿ ಹೆಚ್ಚುತ್ತದೆ.
  3. ತುಳಸಿ ಎಲೆಯನ್ನು ಸೇವಿಸುವುದರಿಂದ  ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು  ಹೊಂದಿದೆ.
  4. ರಾಮ ತುಳಸಿಯು ತೀವ್ರ ಉಸಿರಾಟ ಸಮಸ್ಯೆಗಳಿಗೆ ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
  5. ತುಳಸಿಯ ರಸವನ್ನು ಶೀತ, ಜ್ವರ, ಮತ್ತು ಕೆಮ್ಮಿಗೆ ನೀಡಲಾಗುತ್ತದೆ.
  6. ತುಳಸಿ ಎಲೆಯು ಮಲೇರಿಯಾ,ನಿದ್ರಾಹೀನತೆ ,ಅಜೀರ್ಣ ಹಾಗೂ ಕಾಲಾರಾ ರೋಗವನ್ನು ಗುಣಪಡಿಸಲು  ಸಹಕಾರಿಯಾಗಿದೆ ಹಾಗೆಯೇ ಈ ಗಿಡವು ಪರಿಣಾಮಕಾರಿ ಔಷಧಿಯಾಗಿದೆ.
  7. ತುಳಸಿ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಚರ್ಮದ ತುರಿಕೆ, ಉರಿ ಮತ್ತು ಮೈಯಲ್ಲಿ ಆಗುವ ಗಂದೆಗಳು ಗುಣವಾಗುತ್ತದೆ.
  8. ತುಳಸಿ ಎಲೆಯ ಜೊತೆಗೆ ಕಾಳುಮೆಣಸನ್ನು ತಿನ್ನುವುದರಿಂದ ಹಲ್ಲಿನ ನೋವನ್ನು ನಿವಾರಣೆ ಮಾಡಬಹುದು.

ತುಳಸಿಯಿಂದ  ಮಾಡಬಹುದಾದ ಮನೆ ಮದ್ದು

1.ತುಳಸಿ ಕಷಾಯ:

  • ಮನೆಯಲ್ಲೇ ತುಳಸಿ ಕಷಾಯಾವನ್ನು ಸುಲಭವಾಗಿ ಮಾಡಬಹುದು .
  • ತುಳಸಿ ಕಷಾಯವನ್ನು  ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

2.ತುಳಸಿ ಚಹಾ

  • ತುಳಸಿ ಚಹಾವನ್ನು ಕುಡಿಯುವುದರಿಂದ ದೇಹಕ್ಕೆ ತಂಪನ್ನು ನೀಡುತ್ತದೆ.
  • ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

ಮುಖ್ಯ ಅಂಶಗಳು: ತುಳಸಿಯ ಪರಿಚಯ , ಗಿಡಮೂಲಿಕೆಯ ಸಸ್ಯಗಳು ,ತುಳಸಿಯ ವಿಧಗಳು ,ಔಷದೋಪಚಾರ.

Written by,

Niveditha kuttappa

B.E in Computer science

Share This Post
Facebook Twitter Linkedin Google+
  • ಗಿಡಮೂಲಿಕೆಯ ಸಸ್ಯಗಳು
  • ತುಳಸಿಯ ಪರಿಚಯ
  • ತುಳಸಿಯ ವಿಧಗಳು
Newer Older

Leave A Comment